ಐಶ್ವರ್ಯ: ಈಶ್ವರಧರ್ಮ ಪ್ರಭುತ್ವ ಹಾಗೂ ಅತಿಮಾನುಷ ಶಕ್ತಿ ಸಂಪತ್ತುಗಳು. ಅಣಿಮಾ, ಲಘಿಮಾ, ಮಹಿಮಾ, ಪ್ರಾಪ್ತಿ, ಪ್ರಾಕಾಮ್ಯ, ವಶಿತ್ವ, ಈಶಿತ್ವ, ಕಾಮಾವಸಾಯಿತ್ವ ಎಂದು ಎಂಟು ಬಗೆಗಳಿವೆ; ಇವನ್ನು ಅಷ್ಟಸಿದ್ಧಿಗಳೆಂದು ಕರೆದಿದ್ದಾರೆ. ಅಂದರೆ ಅಣುವಿನಷ್ಟು ಸಣ್ಣದಾಗುವ ಶಕ್ತಿಯಿಂದ ಹಿಡಿದು ಇಚ್ಛೆಗಳೇ ಇಲ್ಲದ ಸ್ಥಿತಿಯನ್ನುಂಟುಮಾಡಿಕೊಳ್ಳುವವರೆಗೂ ಬೇಕಾಗಿರುವ ವಿವಿಧ ಶಕ್ತಿಗಳು; ಮಧ್ಯದಲ್ಲಿ ಕ್ರಮವಾಗಿ ಅತಿಲಘುವಾಗುವಿಕೆ, ಪರಿಮಾಣವನ್ನು ಹೆಚ್ಚಿಸಿಕೊಳ್ಳುವಿಕೆ. ಸರ್ವಾಭೀಷ್ಟಗಳ ಈಡೇರಿಕೆ, ಮನಸ್ಸಿನ ಸ್ವಾತಂತ್ರ್ಯ ಎಲ್ಲವನ್ನೂ ತನ್ನ ಇಚ್ಛೆಗೆ ಅಧೀನಪಡಿಸಿಕೊಳ್ಳುವುದು, ಪ್ರಭುತ್ವ-ಇವು ಸೇರಿವೆ. ಅಣಿಮಾದಿ ಶಕ್ತಿಗಳನ್ನು ಕೊಡುವ ಬುದ್ಧಿಧರ್ಮವೆಂದು ಕೆಲವರ ಅಭಿಪ್ರಾಯ (ನೋಡಿ- ಅಷ್ಟಸಿದ್ಧಿಗಳು).     (ಬಿ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ